ರಾಕೇಶ್ ಶರ್ಮಾ
ಭಾರತೀಯ ವಾಯುಸಡೆಯ ವೈಮಾನಿಕ, ನುರಿತ ಪರೀಕ್ಷಾ ವಿಮಾನಚಾಲಕ (ಟೆಸ್ಟ್ ಪೈಲಟ್) ಹಾಗೂ ಭಾರತದ ಪ್ರಥಮ ಗಗನಯಾತ್ರಿ. ಅಂತರಿಕ್ಷಯಾನ ಕ್ಷೇತ್ರದಲ್ಲಿ ಹಿಂದಿನ ಸೋವಿಯೆತ್ ರಷ್ಯ ನಡೆಸಿದ ಅಂತರರಾಷ್ಟ್ರ - ಅಂತರಿಕ್ಷ ಕಾರ್ಯಕ್ರಮದಲ್ಲಿ ಸೋವಿಯೆತ್ ಗಗನಯಾತ್ರಿಗಳೊಂದಿಗೆ ಕೂಡಿಕೊಂಡು ಅಂತರಿಕ್ಷಯಾನ ಮಾಡಿದ ಖ್ಯಾತಿಗೆ ಭಾಜನರಾದವರು.  ಜನನ ಪಂಜಾಬಿನ ಪಾಟಿಯಾಲದಲ್ಲಿ (13 ಜನವರಿ 1949). ಬೆಳೆದದ್ದು ಆಂಧ್ರ ಪ್ರದೇಶದ ಹೈದರಾಬಾದಿನಲ್ಲಿ.   ಪ್ರಾಥಮಿಕಹಂತಗಳ ಸಾಂಪ್ರದಾಯಿಕ ಶಿಕ್ಷಣ ಮುಗಿಸಿದ ಬಳಿಕ ಇವರು ಭಾರತೀಯ ವಾಯುಪಡೆ ಸೇರಿ (13 ಜನವರಿ 1970) ವೈಮಾನಿಕ ವೃತ್ತಿಯನ್ನು ಆರಂಭಿಸಿದರು.  ನಾಲ್ಕೂವರೆ ವರ್ಷಗಳ ಪ್ರಶಿಕ್ಷಣ ಪಡೆದ ಬಳಿಕ ಕಾಳಗವಿಮಾನದ (ಫೈಟರ್ ಚಾಲಕರಾಗಿ) ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದರು.  ಇದರ ಅಂಗವಾಗಿ 1971 ರ ಭಾರತ - ಪಾಕ್ ಯುದ್ಧದಲ್ಲೂ ಅವರು ಭಾಗವಹಿಸಿದ್ದರು.  ಒIಉ  21 ಮತ್ತು  ಒIಉ  23 ಯುದ್ಧ ವಿಮಾನಗಳಲ್ಲಿ 21 ನಿಯೋಜಿತ ಹಾರಾಟಗಳನ್ನು ನಡೆಸಿ ವಿಮಾನ ಚಾಲನೆಯಲ್ಲಿ ವಿಶೇಷ ಕೌಶಲ ಪ್ರದರ್ಶಿಸಿದರು.  ರಾಕೇಶ್ ಶರ್ಮಾ ಮುಂದೆ ಬೆಂಗಳೂರಿನಲ್ಲಿರುವ ವಿಮಾನ ಹಾಗೂ ವಿಮಾನವ್ಯವಸ್ಥೆಗಳ ಪರೀಕ್ಷಾ ಸಂಸ್ಥೆಯಲ್ಲಿ (ಎ. ಎಸ್. ಟಿ. ಇ)  ಪರೀಕ್ಷಾ ವಿಮಾನಚಾಲಕರಾದರು.

ಅಂತರಿಕ್ಷಯಾನಕ್ಷೇತ್ರದಲ್ಲಿ ಸೋವಿಯೆತ್ ರಷ್ಯದ ಸಾಧನೆ ಮಹತ್ತರವಾದುದು. ಅಂತರಿಕ್ಷಕ್ಕೆ ತೆರಳಿದ ಮೊದಲ ಮಾನವನನ್ನು ಉಡಾಯಿಸಿದ ಸೋವಿಯತ್ ರಷ್ಯ ಭಾರತೀಯನೊಬ್ಬನನ್ನು ಬಹುಮಟ್ಟಿಗೆ ಯಾವ ಖರ್ಚೂ ಇಲ್ಲದೇ ಅಂತರಿಕ್ಷಕ್ಕೆ ಕರೆದೊಯ್ದು ಬಳಿಕ ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರುವ ಬಗ್ಗೆ 1980ರ ಸುಮಾರಿಗೆ ಭಾರತದೊಂದಿಗೆ ಪ್ರಸ್ತಾಪ  ನಡೆಸಿತ್ತು.  ತನ್ನದೇ ಆದ ಅಂತರಿಕ್ಷ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದ ಭಾರತ ತನ್ನ ಪ್ರಥಮ ಗಗನಯಾತ್ರಿಯ ಆಯ್ಕೆಮಾಡುವ ಪೂರ್ವಭಾವೀ ಕಾರ್ಯ ಆರಂಭಿಸಿತು.

ಅಂತರಿಕ್ಷಯಾನದ ಮೊದಲೆರಡು ದಶಕಗಳಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗುತ್ತಿದ್ದವರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅತ್ಯುನ್ನತ ಮಟ್ಟದಲ್ಲಿ ಕಾಪಾಡಿಕೊಂಡಿದ್ದ ವೈಮಾನಿಕರಾಗಿದ್ದರು. ಅದರಲ್ಲೂ ಪರೀಕ್ಷಾ ವಿಮಾನಚಾಲಕರು ತಮ್ಮ ಕಾರ್ಯಾನಿರ್ವಹಣೆಯ ಸಮಯದಲ್ಲಿ ವಿಮಾನದ ವೇಗ ಘಂಟೆಗೆ ಕೆಲವಾರು ಸಾವಿರ ಕಿಲೊಮೀಟರ್‍ಗಳಷ್ಟಿರುವುದರಿಂದ ಅವರನ್ನು ಗಗನಯಾತ್ರಿಗಳನ್ನಾಗಿ ಆಯ್ಕೆಮಾಡುವುದು ಇಲ್ಲಿಯ ಕ್ರಮ. ಏಕೆಂದರೆ ಭೂಮಿಯನ್ನು ಕೆಲವೇ ನೂರು ಕಿಲೋಮೀಟರ್‍ಗಳ ಎತ್ತರದಲ್ಲಿ ಪರಿಭ್ರಮಿಸಲು ಗಗನಯಾತ್ರಿಯೊಬ್ಬನು ಘಂಟೆಗೆ ಇಪ್ಪತ್ತೆಂಟು ಸಾವಿರ ಕಿಲೋಮೀಟರುಗಳಷ್ಟು ಅಗಾಧವಾದ ವೇಗವನ್ನು ಸಾಧಿಸಬೇಕಾದ ಸಾಮಥ್ರ್ಯವನ್ನು ಭರಿಸಬೇಕಾಗುತ್ತದೆ.  

ಭಾರತದ ಪ್ರಥಮ ಗಗನಯಾತ್ರಿಯನ್ನು ಆರಿಸುವ ಸಂಬಂಧದಲ್ಲಿ ನೂರೈವತ್ತು ವೈಮಾನಿಕರನ್ನು ಸಂದರ್ಶನ ಮಾಡಿದ ಬಳಿಕ ಆಯ್ಕೆಯ ಸಮಿತಿ ರಾಕೇಶ್ ಶರ್ಮಾ ಹಾಗೂ ರವೀಶ ಮಲ್ಹೋತ್ರಾ ಎಂಬ ಇಬ್ಬರು ಪರೀಕ್ಷಾ ವಿಮಾನಚಾಲಕರನ್ನು ಭಾರತ - ಸೋವಿಯೆತ್ ರಷ್ಯ ಜಂಟಿ ಅಂತರಿಕ್ಷಯಾನ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿತು.  ಅ ಕಾರ್ಯಕ್ರಮದ ಅಡಿಯಲ್ಲಿ ರಷ್ಯದ ಅಂತರಿಕ್ಷನೌಕೆಯಲ್ಲಿ ಭೂಕಕ್ಷೆಗೆ ತೆರಳಲು ಭಾರತದ ಒಬ್ಬನೇ ಗಗನಯಾತ್ರಿಗೆ ಅವಕಾಶವಿದ್ದರೂ ಕಾರಣಾಂತರಗಳಿಂದ ಇಬ್ಬರಲ್ಲಿ ಯಾರೇ ಒಬ್ಬರು ಯಾನದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಇನ್ನೊಬ್ಬರು ಅವರ ಬದಲಿಗೆ ತೆರಳಲು ಸರ್ವವಿಧದಲ್ಲೂ ಸಿದ್ಧವಾಗಿರುವಂತೆ ಮಾಡುವ ಉದ್ದೇಶದಿಂದ ಇಬ್ಬರನ್ನೂ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.  ಆದರೆ ಅಂತರಿಕ್ಷಕ್ಕೆ ತೆರಳುವ ಅವಕಾಶ ಅಂತಿಮವಾಗಿ ಒದಗಿದ್ದು ರಾಕೇಶ್ ಶರ್ಮಾ ಅವರಿಗೆ.

 ಈ ರೀತಿ ತರಬೇತಿಗಾಗಿ ರಷ್ಯಕ್ಕೆ ತೆರಳಿದ ಶರ್ಮಾ ಹಾಗೂ ಮಲ್ಹೋತ್ರಾ ಇಬ್ಬರೂ ಅಂತರಿಕ್ಷಯಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಾತ್ತ್ವಿಕವಾಗಿ ಕಲಿಯುವುದರೊಂದಿಗೇ ಪ್ರಾಯೋಗಿಕವಾಗಿಯೂ ಆ ಸಂಬಂಧದಲ್ಲಿ ಅತ್ಯುತ್ತಮವಾದ ತರಬೇತಿಯನ್ನು ಪಡೆದರು. ಅದರಲ್ಲೂ ಅಂತರಿಕ್ಷದಲ್ಲಿ ಕಂಡುಬರುವ ತೂಕರಹಿತಸ್ಥಿತಿಯನ್ನು ಪರಿಚಯಿಸುವ ಸಲುವಾಗಿ ಅವರನ್ನು ವಿಶೇಷ ವಿಮಾನವೊಂದರಲ್ಲಿ ಕರೆದೊಯ್ಯುವ ಮೂಲಕ ತರಬೇತಿ ನೀಡಲಾಯಿತು.

ಮುಂದೆ 1984 ರಲ್ಲಿ ಏಪ್ರಿಲ್ 3 ರಂದು ರಾಕೇಶ್ ಶರ್ಮಾ ಅವರು ತಮ್ಮ ಇಬ್ಬರು ಸೋವಿಯೆತ್ ರಷ್ಯನ್ ಸಹಚರರಾದ ಯೂರಿಮ್ಯಾಲಿಷೇವ್ ಹಾಗೂ ಗೆನ್ನಾಡಿ ಸ್ಟ್ರಿಕಲೋವ್ ಎಂಬರೊಡನೆ ಸೊಯೂಜ್ ಖಿ - 11 ನೌಕೆಯಲ್ಲಿ ಕುಳಿತು ಅಂತರಿಕ್ಷಕ್ಕೆ ತೆರಳಿದರು.  ಆ ನೌಕೆಯನ್ನು ಹೊತ್ತು ಬೈಕನೋರ್ ಅಂತರಿಕ್ಷಕೇಂದ್ರದಿಂದ ಮೇಲೆದ್ದ ಬೃಹತ್ ಸೊಯೂಜ್ ರಾಕೆಟ್ ಉಡಾವಣೆಗೊಂಡ ಮುಂದಿನ ಒಂಬತ್ತು ಮಿನಿಟುಗಳಲ್ಲಿ ನೌಕೆಯನ್ನು ಭೂಕಕ್ಷೆಗೆ ಸೇರಿಸಿತು.  ನೌಕೆಯಲ್ಲಿದ್ದ ಗಗನಗಾಮಿಗಳು ಸುಮಾರು ಒಂದು ದಿವಸದಷ್ಟು ಕಾಲ ಸುಮಾರು ಇನ್ನೂರು ಕಿಲೋಮೀಟರ್ ಎತ್ತರದ ಕಕ್ಷೆಯೊಂದರಲ್ಲಿ ಭೂಮಿಯನ್ನು ಅಂತರಿಕ್ಷದಲ್ಲಿ ಭೂಮಿಯನ್ನು ಪರಿಭ್ರಮಿಸುತ್ತಿದ್ದ ಸಲ್ಯೂತ್ -  7 ಎಂಬ ಅಂತರಿಕ್ಷನಿಲ್ದಾಣವನ್ನು (ಸ್ಟೇಸ್ ಸ್ಟೇಷನ್) ಸಮೀಪಿಸಿ, ಬಳಿಕ ಅದನ್ನು ಯಶಸ್ವಿಯಾಗಿ ಕೂಡಿಕೊಂಡರು (ಡಾಕ್).  ಈ ನಿಲ್ದಾಣದಲ್ಲಿ ಇನ್ನೂ ಮೂವರು ರಷ್ಯನ್ ಗಗನಯಾತ್ರಿಗಳಿದ್ದರು.  ಅಂತರಿಕ್ಷದಲ್ಲಿ ದೀರ್ಘಾವಧಿಯ ತನಕ ವಾಸಿಸಲು ಹಾಗೂ ವಿe್ಞÁನದ ವಿವಿಧ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸಲು ಬೇಕಾದ ಪರಿಕರಗಳೆಲ್ಲವನ್ನೂ ಆ ಅಂತರಿಕ್ಷ ನಿಲ್ದಾಣ ಒಳಗೊಂಡಿತ್ತು.  ಸೋವಿಯೆತ್ ರಷ್ಯದಿಂದ ಉಡಾವಣೆಗೊಂಡ ಸೋವಿಯೆತ್ - ರಷ್ಯೇತರ ಗಗನಗಾಮಿಗಳ ಪೈಕಿ ರಾಕೇಶ್ ಶರ್ಮಾ ಹನ್ನೊಂದನೆಯವರು.

ಭಾರತ - ಸೋವಿಯೆತ್ ರಷ್ಯ ಜಂಟಿ ಅಂತರಿಕ್ಷಯಾನದಲ್ಲಿ ರಾಕೇಶ ಶರ್ಮಾ ಅವರನ್ನು ಅತಿಥಿ ಗಗನಯಾತ್ರಿ (ಗೆಸ್ಟ್ ಕಾಸ್ಮೊನಾಟ್) ಎಂಬ ಹೆಸರಿನಿಂದ ಗೌರವಿಸಲಾಗಿತ್ತು.  ಹೀಗೆ ರಷ್ಯನ್ನರಿಗೆ ಸುಮಾರು ಒಂದು ವಾರದ ಕಾಲ ಅಂತರಿಕ್ಷದಲ್ಲಿ ಅತಿಥಿಯಾಗಿದ್ದು ರಾಕೇಶ್ ಶರ್ಮಾ ಅನೇಕ ಪ್ರಯೋಗಗಳನ್ನು ಅಲ್ಲಿ ನಿರ್ವಹಿಸುವ ಮೂಲಕ ತಮ್ಮ ಅಂತರಿಕ್ಷವಾಸದ ಅವಧಿಯನ್ನು ಸಾರ್ಥಕಪಡಿಸಿಕೊಂಡರು.

ಆ ಪ್ರಯೋಗಗಳ ಪೈಕಿ ಮುಖ್ಯವಾದದ್ದು ಅಂತರಿಕ್ಷದಲ್ಲಿ ಯೋಗಾಭ್ಯಾಸ ನಡೆಸುವುದನ್ನು ಕುರಿತುದ್ದಾಗಿತ್ತು.  ಅಂತರಿಕ್ಷದಲ್ಲಿ ವಿಹರಿಸುವ ಗಗನಯಾತ್ರಿಯೊಬ್ಬನಿಗೆ ತೂಕವೇ ಇಲ್ಲದಿರುವಂತಾಗಿ (ವೆಯ್ಟ್‍ಲೆಸ್‍ನೆಸ್) ಅವನು ಅಂತರಿಕ್ಷನೌಕೆಯಲ್ಲಿ ತೇಲಾಡುತ್ತಿರುತ್ತಾನೆ. ಆದರೆ ಭೂಮಿಯ ಮೇಲಿನ ತೂಕಸಹಿತ ಪರಿಸರದಲ್ಲಿ ಬೆಳೆದ ಅವನ ದೇಹ ಆ ತೂಕರಹಿತಸ್ಥಿತಿಯನ್ನು ಸಹಿಸದೇ ಅವನಿಗೆ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಅಂಥ ದುಷ್ಪರಿಣಾಮಗಳನ್ನು ಯೋಗಾಭ್ಯಾಸ ಕಡಿಮೆ ಮಾಡಬಲ್ಲುದೇ ಎಂಬುದನ್ನು ಶರ್ಮಾ ಪರೀಕ್ಷಿಸಿದರು.  ಇದಲ್ಲದೆ ಅವರು ರೋಹಿತದ (ಸ್ಟೆಕ್ಟ್ರಮ್) ವಿವಿಧ ಬಣ್ಣಗಳ ಬೆಳಕನ್ನು ಪ್ರತ್ಯೇಕವಾಗಿ ಗ್ರಹಿಸುವ ಮೂಲಕ ವಿಶೇಷ ಚಿತ್ರಗಳನ್ನು ತೆಗೆದುಕೊಳ್ಳಬಲ್ಲ ಕೆಮರದ ಮೂಲಕ ಭಾರತದ ಮೇಲ್ಮೈಯ ಸ್ಪಷ್ಟವಾದ ವಿವಿಧ ಛಾಯಾಚಿತ್ರಗಳನ್ನು ತೆಗದುಕೊಂಡರು.  ಪದಾರ್ಥವಿe್ಞÁನ (ಮೆಟೀರಿಯಲ್ ಸೈನ್ಸ್) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುದ್ಧವಾದ ಮಿಶ್ರಲೋಹವೊಂದನ್ನು ಅಂತರಿಕ್ಷದ ವಿಶಿಷ್ಟ ಪರಿಸರದಲ್ಲಿ ತಯಾರಿಸುವ ವಿಧಾನವೊಂದನ್ನು ಶರ್ಮಾ ಪರಿಶೀಲಿಸಿದರು.  ಇಂದಿನ ಅನೇಕ ಉನ್ನತ ತಂತ್ರe್ಞÁನಕ್ಷೇತ್ರಗಳಿಗೆ ಬೇಕಾದ ಶುದ್ಧವಾದ ಸ್ಫಟಿಕಗಳನ್ನು  (ಕ್ರಿಸ್ಟಲ್ಸ್)  ಹಾಗೂ ಕೆಲವು ವಿಶಿಷ್ಟಗುಣಗಳನ್ನು ಹೊಂದಿರುವ ಔಷಧಿಗಳನ್ನು ಅಂತರಿಕ್ಷದ ತೂಕರಹಿತಸ್ಥಿತಿಯಲ್ಲಿ ತಯಾರಿಸುವುದು ಸಾಧ್ಯ ಎಂಬುದು ತಿಳಿದು ಬಂದಿದೆ.

ಅಂತರಿಕ್ಷದಲ್ಲಿ ತಮ್ಮನ್ನು ವಿವಿಧ ಬಗೆಯ ಉಪಯುಕ್ತ ಚಟುವಟಿಕೆಗಳಲ್ಲಿ ತೊಡಗಿಕೊಂಡ ರಾಕೇಶ್ ಶರ್ಮಾ ಸಲ್ಯೂತ್ - 7 ರಲ್ಲಿ ಸುಮಾರು ಏಳು ದಿವಸಗಳ ಕಾಲ ವಾಸಿಸಿದ ಬಳಿಕ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿದರು (11 ಏಪ್ರಿಲ್ 1984).  ಅವರನ್ನು ಆ ನಿಲ್ದಾಣದಿಂದ ಕರೆತಂದದ್ದು ಸೂಯೆಜ್ ಖಿ - 10 ಎಂಬ ಮತ್ತೊಂದು ಅಂತರಿಕ್ಷನೌಕೆ.  ಅದು ಸಲ್ಯೂತ್ - 7 ಅಂತರಿಕ್ಷನಿಲ್ದಾಣ ಮತ್ತೊಂದು ಬದಿಯಲ್ಲಿ ಅವರು ಅಲ್ಲಿ ತೆರಳುವ ಮೊದಲೇ ಕೂಡಿಕೊಂಡಿತ್ತು.

ಅಂತರಿಕ್ಷದಿಂದ ಹಿಂತಿರುಗಿದ ಕೆಲಕಾಲದ ಅನಂತರ ಭೂಮಿಯ ಮೇಲಿನ ತೂಕಸಹಿತ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಂಡ ಶರ್ಮಾ ಭಾರತಕ್ಕೆ ಹಿಂತಿರುಗಿದರು.  ಶರ್ಮಾ ಅವರ ಈ ಸಾಧನೆಯನ್ನು ಶ್ಲ್ಯಾಘಿಸಿ ಭಾರತ ಸರ್ಕಾರ ಇವರಿಗೆ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತು.  ಸೋವಿಯೆತ್ ರಷ್ಯ ಇವರಿಗೆ ಸೋವಿಯೆತ್ ಒಕ್ಕೂಟದ ವೀರ (ಹೀರೋ ಆಫ್ ಸೋವಿಯೆತ್ ಯೂನಿಯನ್) ಎಂಬ ಪ್ರಶಸ್ತಿ ನೀಡಿ ಗೌರವಿಸಿತು.  ಇದರ ಜೊತೆಗೆ ತನ್ನ ಸ್ವರ್ಣಪದಕವನ್ನೂ ಇತ್ತು ಸನ್ಮಾನಿಸಿದೆ.

ರಾಕೇಶ್ ಶರ್ಮಾ ಈಗ ಬೆಂಗಳೂರಿನ ಹಿಂದೂಸ್ಥಾನ್ ವಿಮಾನ ಕಾರ್ಖಾನೆಯಲ್ಲಿ (ಎಚ್.ಎ.ಎಲ್) ಉನ್ನತ ಅಧಿಕಾರದ ಸ್ಥಾನವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
(ಬಿ.ಆರ್.ಜಿ.ಪಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ